ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದ ಯುಗಳ ಹಾಡಿನ ಬಗ್ಗೆ ಸ್ಪಷ್ಟನೆ.
Posted date: 06 Tue, Nov 2012 ? 06:27:38 PM
ದೇಶಭಕ್ತ, ಸ್ವಾಂತಂತ್ರ್ಯಯೋಧ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಚಿತ್ರವನ್ನು  ರಾಯಣ್ಣನ ಪರಮ ಭಕ್ತ ಆನಂದ್ .ಬಿ.  ಅಪ್ಪುಗೋಳ ಅವರು ಭಕ್ತಿಯಿಂದ ನಿರ್ಮಿಸಿರುವ ಈ ಚಿತ್ರದಲ್ಲಿ ಬರುವ ಯುಗಳ ಗೀತೆಯ ಬಗ್ಗೆ ಜಯ ಕರ್ನಾಟಕ ಸಂಘಟನೆಯು ವಿರೋಧ ವ್ಯಕ್ತ ಪಡಿಸುತ್ತಿರುವುದರಿಂದ  ಈ ಮೂಲಕ ಸ್ಪಷ್ಟನೆ ಏನೆಂದರೆ:- 
ಹಲವರು ವಿರೋಧಿಸುವಂತೆ ಸ್ವತಃ ರಾಯಣ್ಣ ಯುಗಳ ಗೀತೆಯನ್ನು ಹಾಡುವುದಿಲ್ಲ.  ರಾಯಣ್ಣನ ಶೌರ್ಯ ಪರಾಕ್ರಮಗಳನ್ನು ನೋಡಿ, ಸಿಕ್ಕರೆ ನನಗಿಂತಹ ಗಂಡ ಸಿಗಬೇಕೆಂದು ಒಂದು ಹೆಣ್ಣು ಕಲ್ಪಿಸಿಕೊಳ್ಳುತ್ತಾಳೆ. . . ಅಷ್ಟೇ ವಿನಃ ರಾಯಣ್ಣನ ದೇಶಪ್ರೇಮವನ್ನಷ್ಟೇ ಈ ಚಿತ್ರದಲ್ಲಿ ತೋರಿಸಿದ್ದೇವೆ . ಆದ್ದರಿಂದ ಯಾವ ಕನ್ನಡಿಗರಿಗಾಗಲಿ, ದೇಶಭಕ್ತರಿಗೆ ಆಗಲಿ, ರಾಯಣ್ಣನ ಭಕ್ತರಿಗೆ ಆಗಲಿ ನೋವುಂಟು ಮಾಡುವ ಉದ್ದೇಶದಿಂದ ಹಾಡನ್ನು ಚಿತ್ರಿಸಿಲ್ಲ. ತಮ್ಮಲ್ಲಿ ಆ ರೀತಿಯ ಭಾವನೆ ಮೂಡಿ ನೋವುಂಟಾಗಿದ್ದಲ್ಲಿ ದಯವಿಟ್ಟು ಕ್ಷಮಿಸಿ. 

ನಮ್ಮ ಈ ಕನ್ನಡನಾಡಿನ, ಕ್ರಾಂತಿವೀರನ ಚಿತ್ರಕ್ಕೆ ತಾವುಗಳು ಸಹಕಾರ ನೀಡಿ, ರಾಯಣ್ಣನ  ದೇಶಭಕ್ತಿ, ನಾಡಪ್ರೇಮ, ನಿಸ್ವಾರ್ಥ ಸೇವೆ ನಾಡಿನ ಮನೆಮನೆಗೂ ಜನರ ಮನ ಮನಗಳಿಗೂ  ತಲುಪಿಸಲು ತಮ್ಮ  ಸಹಕಾರ ಅತ್ಯಮೂಲ್ಯ 

 ತಮ್ಮ  ಸಹಕಾರದ ನಿರೀಕ್ಷೆಯೊಂದಿಗೆ, 
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed